ಎಲ್ಲಾ ದೇವಸ್ಥಾನದ ಬಂಗಾರದ ಶಿಖರದ ಹಿಂದೆ ಇರುವ ಕಾರಣ
- pathikonda shambhunath
- Aug 7, 2021
- 1 min read

ದೇವಸ್ಥಾನಗಳು ಎಂದರೆ ನಮ್ಮ ಬೇಡಿಕೆಗಳನ್ನು ಹೇಳಿಕೊಳ್ಳುವ ಜಾಗವಲ್ಲ, ಅದು ಒಂದು ದೊಡ್ಡ ಶಕ್ತಿ ಇರುವ ಕೇಂದ್ರ . ಫೋನ್ಗಳಿಗೆ ಚಾರ್ಜರ್ ರೀತಿ ಮನುಷ್ಯರಿಗೆ ಒಂದು ಶಕ್ತಿಯ ಅವಶ್ಯಕತೆ ಇದೆ. ಆ ಶಕ್ತಿ ದೇವಸ್ಥಾನಗಳಲ್ಲಿ ದೊರೆಯುವ ರೀತಿ ನಮ್ಮ ಪೂರ್ವಜರು ದೇವಸ್ಥಾನವನ್ನು ನಿರ್ಮಿಸಿದರು. ಯಾವ ವ್ಯಕ್ತಿಯಾದರೂ ದೇವಸ್ಥಾನಕ್ಕೆ ಹೋದರೆ ಅವನಿಗೆ ಒಂದು ರೀತಿ ಶಾಂತಿ ದೊರೆಯುತ್ತದೆ .ಈ ಶಾಂತಿಗೆ ಕಾರಣ ಅವನಲ್ಲಿ ಆಗುವ ಶಕ್ತಿಯ ಸಂಚಾರ, ಈ ಶಕ್ತಿಯು ಕಾಸ್ಮಿಕ್ ಎನರ್ಜಿ ರೂಪದಲ್ಲಿ ಮನುಷ್ಯನ ದೇಹದೊಳಗೆ ಪ್ರವೇಶಿಸುತ್ತದೆ. ನೀವು ಧರ್ಮಸ್ಥಳ ಹಾಗೂ ತಿರುಪತಿ ಯಂತಹ ದೇವಸ್ಥಾನಗಳಲ್ಲಿ ಬಂಗಾರದ ಕಳಸ ಇರುವುದನ್ನು ಕಾಣಬಹುದು ಹಾಗೂ ಅಂತಹ ದೇವಸ್ಥಾನಗಳು ಬಹಳ ಶಕ್ತಿಯುತವಾದದ್ದು ನಮಗೆಲ್ಲ ತಿಳಿದಿದೆ. ಅಂತಹ ದೇವಸ್ಥಾನದೊಳಗೆ ಪ್ರವೇಶ ನೀಡಲು ಬಂಗಾರ ಧಾತು ತುಂಬಾ ಉಪಯುಕ್ತವಾದದ್ದು ಆದ್ದರಿಂದ ಅದನ್ನು ಉಪಯೋಗಿಸುತ್ತಾರೆ. ಇದೇ ರೀತಿ ಹೆಣ್ಣುಮಕ್ಕಳು ತಾಳಿ ಸರವನ್ನು ಬಂಗಾರ ಲೋಹದಿಂದ ಮಾಡಿಸಬೇಕು ಎಂಬ ಪ್ರತೀತಿ ಇದೆ. ಇದಕ್ಕೆ ಕಾರಣವೂ ಕೂಡ ಬಂಗಾರ ದಾತುವಿನ ಒಳಗಿರುವ ಕಾಸ್ಮಿಕ್ ಎನರ್ಜಿಯನ್ನು ಸೆಳೆಯುವ ವಿಶೇಷ ಶಕ್ತಿ. ಇದು ಮನುಷ್ಯನನ್ನು ಶಾಂತಿಯಿಂದ ಇರಲು ಹಾಗೂ ಆರೋಗ್ಯವನ್ನು ಸಮೃದ್ಧಿ ಗೊಳಿಸಲು ತನ್ನದೇ ಆದ ಶೈಲಿಯಲ್ಲಿ ಪಾತ್ರ ನಿರ್ವಹಿಸುತ್ತದೆ.
Comments